ದೈನಂದಿನ, ವಾರದ ಮತ್ತು ಮಾಸಿಕ ಬಸ್ ಪಾಸ್ ಪ್ರಯಾಣಿಕರಿಗೆ ಸುಲಭವಾಗಿ ಆನ್‌ಲೈನ್ ಮೂಲಕ ಒದಗಿಸಲು BMTC ಯೊಂದಿಗೆ Tummoc ಕೂಡ ಪಾರ್ಟನರ್ ಆಗಿ ಕೆಲಸ ಮಾಡುತ್ತಿದೆ. ಪ್ರತಿದಿನದ ಪ್ರಯಾಣವು ಸರಳ ಮತ್ತು ಸುಲಭವಾಗಲಿ ಎಂಬ ಉದ್ದೇಶದಿಂದ Tummoc ಡಿಜಿಟಲ್ ಬಸ್ ಪಾಸ್ ನೀಡುವುದರ ಮೂಲಕ ಪ್ರಯಾಣಿಕರ ಸಮಯ ಉಳಿಸುವ ಕಾರ್ಯ ಮಾಡುತ್ತಿದೆ.
BMTC ಬಸ್ ಪಾಸ್‌ಗಳನ್ನು Tummoc ಅಪ್ಲಿಕೇಶನ್‌ನಲ್ಲಿ ಮೂಲಕ ಆನ್‌ಲೈನ್‌ನಲ್ಲಿ ಹೇಗೆ ಬುಕ್ ಮಾಡುವುದು ಎಂಬುದರ ಹಂತ-ಹಂತದ ವಿವರ ಈ ಕೆಳಗೆ ನೀಡಲಾಗಿದೆ. ಒಂದೇ ಕ್ಲಿಕ್ ಮೂಲಕ ಟಿಕೆಟ್ ಬುಕ್ ಮಾಡುವ ಸಂಪೂರ್ಣ ಪ್ರಕ್ರಿಯೆ ವಿಡಿಯೋ ಮೂಲಕ ನೋಡಲು ಕೆಳಗೆ ಸ್ಕ್ರಾಲ್ ಮಾಡಿ.
ಹಂತ 1: ನೀವು Tummoc ಅಪ್ಲಿಕೇಶನ್ ಹೊಂದಿಲ್ಲದಿದ್ದರೆ ಈ ಕೂಡಲೇ ಡೌನ್‌ಲೋಡ್ ಮಾಡಿ. ಡೌನ್‌ಲೋಡ್ ಆದ ಬಳಿಕ ಲಾಗ್ ಇನ್/ಸೈನ್ ಅಪ್ ಮಾಡಿ.
ಹಂತ 2: Tummoc ಅಪ್ಲಿಕೇಶನ್ ಹೋಮ್ ಸ್ಕ್ರೀನ್‌ನಲ್ಲಿ “BMTC ಪಾಸ್‌ಗಳು” ಬಟನ್ ಮೇಲೆ ಒತ್ತಿ.
ಅಥವಾ
ನೀವು ಪ್ರಯಾಣಿಸುವ ಸ್ಥಳ ಸಹ ಹುಡುಕಬಹುದು. ಒಮ್ಮೆ ನಿಮಗೆ ಮಾರ್ಗ, ಪ್ರಯಾಣದ ಆಯ್ಕೆಗಳನ್ನು ತೋರಿಸಿದಾಗ ನಿಮ್ಮ ಪಾಸ್ ಅನ್ನು ಬುಕ್ ಮಾಡಲು ನಿಮಗೆ ಆಯ್ಕೆ ನೀಡಲಾಗುತ್ತದೆ.
Tummoc ನಲ್ಲಿ BMTC ಬಸ್ ಪಾಸ್
ಹಂತ 3: ನಿಮಗೆ ಯಾವ ರೀತಿಯ ಪಾಸ್ ಬೇಕೆಂಬುದನ್ನು ಆಯ್ಕೆ ಮಾಡಿ, ದೈನಂದಿನ ಪಾಸ್, ವಾರದ ಪಾಸ್ ಮತ್ತು ಮಾಸಿಕ ಪಾಸ್.
ಹಂತ 4: ನಿಮಗೆ ಯಾವ ರೀತಿಯ ಪಾಸ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಆಯಾ ಪಾಸ್‌ಗೆ ಅನುಗುಣವಾಗಿ ಬೆಲೆ ಬದಲಾವಣೆ ಆಗಲಿದೆ. Tummoc ನಲ್ಲಿ ಸದ್ಯ BMTC ದೈನಂದಿನ ಬಸ್ ಪಾಸ್, ವಾರ ಮತ್ತು ಮಾಸಿಕ ಪಾಸ್’ಗಳು ಲಭ್ಯವಿದೆ.
ಹಂತ 5: ನಿಮ್ಮ ಬುಕಿಂಗ್ ವಿವರಗಳನ್ನು ನಮೂದಿಸುವ ಸಮಯ. ಎಲ್ಲಾ ವಿವರಗಳನ್ನು ಈಗಾಗಲೇ ಭರ್ತಿ ಮಾಡಲಾಗಿರುತ್ತದೆ. ವಿವರವನ್ನು ಬದಲಾವಣೆ, ವೈಯಕ್ತಿಕ ಮಾಹಿತಿ ಬದಲಾಯಿಸಬೇಕಿದ್ದರೇ ‘ಎಡಿಟ್’ ಬಟನ್ ಒತ್ತಿ, ಬಳಿಕ ನೀವು ಸರಿಪಡಿಸಬೇಕಾದ ಮಾಹಿತಿ ತುಂಬಿದ ನಂತರ ಸೇವ್ ಬಟನ್ ಒತ್ತಿ, ಮುಂದುವರಿಸಿ ಮೇಲೆ ಕ್ಲಿಕ್ ಮಾಡಿ.
ಹಂತ 6: ಇದು ಪ್ರಯಾಣಿಕರ ಪರಿಶೀಲನೆಯ ಹಂತವಾಗಿದೆ. ಇಲ್ಲಿ, ನೀವು ಪ್ರಯಾಣಿಸುವಾಗ ನಿಮ್ಮೊಂದಿಗೆ ಕೊಂಡೊಯ್ಯುವ ಸರ್ಕಾರದಿಂದ ನೀಡಿರುವ ಗುರುತಿನ ಚೀಟಿ ಮತ್ತು ಐಡಿ ಸಂಖ್ಯೆಯ ಜೊತೆಗೆ ಫೋಟೋ ಪರಿಶೀಲನೆಗಾಗಿ ನೀವು ಸೆಲ್ಫಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಒಮ್ಮೆ ಮಾಡಿದ ನಂತರ “ಮುಂದೆ” ಬಟನ್ ಒತ್ತಿ.
ಹಂತ 7: ಈಗ, ನಿಮ್ಮ BMTC ಬಸ್ ಪಾಸ್‌ನ ಪೂರ್ವವೀಕ್ಷಣೆಯನ್ನು ನಿಮಗೆ ತೋರಿಸಲಾಗುತ್ತದೆ. ಎಲ್ಲಾ ಪಾಸ್ ಮತ್ತು ವೈಯಕ್ತಿಕ ವಿವರಗಳು ಸರಿಯಾಗಿದೆಯೇ ಎಂದು ಎರಡು ಬಾರಿ ಪರಿಶೀಲಿಸಿ. ಎಲ್ಲವೂ ಸರಿಯಾಗಿದ್ದರೇ ಅದನ್ನು ದೃಢೀಕರಿಸಲು ಚೆಕ್ ✅ ಬಾಕ್ಸ್ ಅನ್ನು ಪರಿಶೀಲಿಸಿ, ಬಳಿಕ ಹಣವನ್ನು ವರ್ಗಾಯಿಸಲು ‘ಪೇಮಂಟ್ ಮಾಡಿ’ ಬಟನ್ ಕ್ಲಿಕ್ ಮಾಡಿ.
ಹಂತ 8: ಒಮ್ಮೆ ನೀವು ಪೇಮಂಟ್ ಪಾವತಿ ಮಾಡಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಬೆರಳ ತುದಿಯಲ್ಲಿಯೇ ನಿಮ್ಮ BMTC ಬಸ್ ಪಾಸ್ ಅನ್ನು ನೀವು ಪಡೆಯಬಹುದು.
ಇದೀಗ BMTC ಬಸ್ ಪಾಸ್, ಟಿಕೆಟ್ ಪಡೆಯುವುದು ಸರಳ ಮತ್ತು ಸುಲಭವಾಗಿದೆ. ನಗದುರಹಿತ, ಸಂಪರ್ಕರಹಿತ ಮತ್ತು ಯಾವುದೇ ಜಗಳವಿಲ್ಲದೇ ಟಿಕೆಟ್‌ಗಾಗಿ ಕಾಯುವ ಅವಶ್ಯಕತೆ ಇಲ್ಲದೇ ನಿಮ್ಮ ಟಿಕೆಟ್ ನಿಮ್ಮ ಪಾಕೆಟ್ ಸೇರಲಿದೆ.
ಪಾಸ್ ಪಡೆದು ಪ್ರಯಾಣಿಸುವ ವೇಳೆ ಬಸ್ ಕಂಡಕ್ಟರ್ ಟಿಕೆಟ್ ಪರೀಶಿಲನೆಗಾಗಿ ಬಂದಾಗ Tummoc ನಲ್ಲಿ ಪಡೆದ ಟಿಕೆಟ್‌ನ QR ಕೋಡ್ ತೋರಿಸಿರಿ. ಆಗ ಕಂಡಕ್ಟರ್ ನಿಮ್ಮ ಟಿಕೆಟ್ ಪರಿಶೀಲಿಸಲು QR ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ಇಲ್ಲವೇ ನಿಮ್ಮ ವಿವರವಿರುವ ಸರ್ಕಾರಿ ಐಡಿಯನ್ನು ಪರಿಶೀಲಿಸಬಹುದು.
ಕನ್ನಡದಲ್ಲಿಯೂ ನೀವು ವಿಡಿಯೋ ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನೀವು ಸುಖಃಕರ ಪ್ರಯಾಣವನ್ನು ಹೊಂದಿರುವಿರಿ ಎಂದು ನಾವು ಭಾವಿಸುತ್ತೇವೆ.
ನಿಮಗಾಗಿ ಹಲವು ಸೇವೆಗಳು ಲಭ್ಯವಾಗಲಿವೆ, ನಮ್ಮ ಸೇವೆಗಳನ್ನು ಪಡೆಯಲು ಟ್ಯೂನ್ ಮಾಡ್ತಾ ಇರಿ.