ಟುಮ್ಯೋಕ್ ಇದೀಗ ಬಿಎಂಟಿಸಿಯೊಂದಿಗೆ ಸಹಯೋಗ ಪಡೆದುಕೊಂಡಿದೆ. ಡಿಜಿಟಲ್ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಟುಮ್ಯೂಕ್ ಉತ್ತಮ ಪ್ರಯಾಣಕ್ಕೆ ಸಹಾಯ ಮಾಡುತ್ತಿದೆ. ಈ ವರ್ಷದ ಆರಂಭದಿಂದಲೂ ಬಿಎಂಟಿಸಿ ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ನೀಡುವ ಮೂಲಕ ಪ್ರತಿದಿನ ಪ್ರಯಾಣ ಸರಳವಾಗಿ ಮಾಡಿಸಿದೆ. ಇದೀಗ ಪ್ರಯಾಣಿಕರ ಪಾಸ್ ನವೀಕರಣವೂ ಮತ್ತಷ್ಟು ಸುಲಭವಾಗಿಸಿದ್ದೇವೆ.
ಬಿಎಂಟಿಸಿ ಬಸ್ ಪಾಸ್ ಟುಮ್ಯೋಕ್ ಅಲ್ಲಿ ನವೀಕರಿಸುವುದು ಹೇಗೆ?
ಹಂತ 1: ಟುಮ್ಯೋಕ್ ಆಪ್ ಓಪೆನ್ ಮಾಡಿ. ಹೋಮ್ ಪೇಜ್ ಅಲ್ಲಿ “Passes” ಆಯ್ಕೆಯನ್ನು ಒತ್ತಿ. ಇದು ನಿಮ್ಮ ಸ್ಕ್ರೀನ್ ಕೆಳಭಾಗದಲ್ಲಿ ಕಾಣಸಿಗುತ್ತದೆ.
ಹಂತ 2: “Active” ಬಟನ್ ಒತ್ತಿ. ಒಂದು ವೇಳೆ ನೀವು ಸಕ್ರಿಯ ಪಾಸ್ ಹೊಂದಿದ್ದರೇ, ಇಲ್ಲವೇ ನೀವು ಬಳಸಿದ ಪಾಸ್ ವ್ಯಾಲಿಡಿಟಿ ಮುಗಿದು ಹೋಗಿದ್ದರೇ “Inactive” ಒತ್ತಿ. ಆಗ ನಿಮಗೆ “Renew” ಬಟನ್ ಕಾಣಿಸುತ್ತದೆ. “Renew” ಬಟನ್ ಸಹಾಯದಿಂದ ನಿಮ್ಮ ಪಾಸ್ ನವೀಕರಿಸಿಕೊಳ್ಳಬಹುದು.
ಹಂತ 3: ನಿಮ್ಮ ಪಾಸ್‌ನ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ. ನೀವು ನೀಡಿದ ಎಲ್ಲಾ ಮಾಹಿತಿ ಸರಿಯಾಗಿದೇ ಎಂಬುದು ಖಚಿತಪಡಿಸಿಕೊಂಡ ಬಳಿಕ “Make Payment” ಮೇಲೆ ಕ್ಲಿಕ್ ಮಾಡಿ.
ಹಂತ 4: ಪೇಮೆಂಟ್ ಮಾಡಿ
ಮುಗಿತು! ನಿಮ್ಮ ಪಾಸ್ ಇದೀಗ ನವೀಕರಣಗೊಂಡಿದೆ. ಎಲ್ಲವು ಕೆಲವೇ ಸೆಕೆಂಡುಗಳಲ್ಲಿ ಆಯಿತು.
ಎಲ್ಲಾ ಪಾಸ್‌ಗಳ ಮೇಲೆ ಇದು ಹೇಗೆ ಕೆಲಸ ಮಾಡುತ್ತದೆ ಇಲ್ಲಿದೆ:
- ದೈನಂದಿನ ಪಾಸ್: ಆಪ್’ನಲ್ಲಿ renew ಬಟನ್ ರಾತ್ರಿ 9 ಗಂಟೆಯಿಂದ ಪಾಸ್ ಖರೀದಿಸಿದವರಿಗೆ ಕಾಣಿಸುತ್ತದೆ.
- ವಾರದ ಪಾಸ್: ಆಪ್’ನಲ್ಲಿ renew ಬಟನ್ ವಾರದ ಕೊನೆಯ ದಿನದಂದು ಸಂಜೆ 6 ಗಂಟೆಯಿಂದ ಕಾಣಿಸುತ್ತದೆ. ಉದಾಹರಣೆಗೆ ಪಾಸ್ ವ್ಯಾಲಿಡಿಟಿ ಕೊನೆಯ ದಿನ
- ಮಾಸಿಕ ಪಾಸ್: ಪಾಸ್ ವ್ಯಾಲಿಡಿಟಿ ಮುಗಿಯುವ 24 ಗಂಟೆ ಮೊದಲೇ renew ಬಟನ್ ಕಾಣಿಸುತ್ತದೆ.
ಸೂಚನೆ: ಒಂದು ವೇಳೆ ಪಾಸ್ ಆಗಲೇ ವ್ಯಾಲಿಡಿಸಿ ಮುಗಿದು ಹೋಗಿದ್ದರೇ, ಅಂತಹ ಪಾಸ್ ಸಕ್ರಿಯಗೊಳಿಸಲು ಇತ್ತೀಚೆಗೆ ಮುಗಿದ ಪಾಸ್ ಆಯ್ಕೆಯಲ್ಲಿ renew ಮಾಡಿಕೊಳ್ಳಬಹುದು.
ಸರಳವಾಗಿದೆ! ನಿಮ್ಮ ಪ್ರಯಾಣ ಇನ್ನಷ್ಟು ಸರಳ ಮತ್ತು ಸುಲಭಗೊಳಿಸಲು ನಾವು ಸಿದ್ಧತೆ ನಡೆಸಿದ್ದೇವೆ. ನಿರೀಕ್ಷಿಸಿ
ಒಂದು ವೇಳೆ ನೀವು Tummoc, ಅಲ್ಲಿ ಡಿಜಿಟಲ್ ಪಾಸ್ ಖರೀದಿಸದೇ ಇದ್ದರೇ ನೀವು ಉತ್ತಮ ಕ್ಷಣಗಳನ್ನು ಕಳೆದುಕೊಂಡಿದ್ದೀರಿ. ಕೂಡಲೇ ಟ್ಯುಮೂಕ್ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣ ಆನಂದಿಸಿ. #SmartCommute life!